Sunday, 29 November 2026 — Akshara.Live

Akshara.Live

Kannada News, Government Jobs, Educational Resources

ಜಾಹೀರಾತು
ಸರ್ಕಾರಿ ಯೋಜನೆಗಳು

Free sewing machine application form

Ambika
ವರದಿ: Ambika ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 5 ವೀಕ್ಷಣೆಗಳು
ಜಾಹೀರಾತು

ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮವು 2026-27ನೇ ಸಾಲಿನಲ್ಲಿ ಅರ್ಹ ಮಹಿಳೆಯರಿಗೆ ಉಚಿತ ಜಿಜಾಗ್ ಹೊಲಿಗೆ ಯಂತ್ರ ವಿತರಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 24, 2026 ಕೊನೆಯ ದಿನವಾಗಿದೆ.

ಅರ್ಹತೆ ಮತ್ತು ಆದಾಯ ಮಿತಿ

ಜಾಹೀರಾತು

· ಸಮುದಾಯ: ಅರ್ಜಿದಾರರು ಕರ್ನಾಟಕ ವಿಶ್ವಕರ್ಮ ಸಮುದಾಯ ಅಥವಾ ಅದರ ಉಪಜಾತಿಗೆ ಸೇರಿರಬೇಕು.
· ವಯಸ್ಸು: 18 ರಿಂದ 55 ವರ್ಷಗಳ ಒಳಗಿರಬೇಕು.
· ಆದಾಯ ಮಿತಿ (ವಾರ್ಷಿಕ): ಗ್ರಾಮೀಣ ಪ್ರದೇಶದಲ್ಲಿ ₹98,000 ಮತ್ತು ನಗರ/ಪಟ್ಟಣ ಪ್ರದೇಶದಲ್ಲಿ ₹1,20,000 ಮೀರಬಾರದು.
· ಇತರೆ: ಕರ್ನಾಟಕದ ಖಾಯಂ ನಿವಾಸಿಗಳಿಗೆ ಮತ್ತು ಬಡತನ ರೇಖೆಗಿಂತ ಕೆಳಗಿನ (BPL) ಕುಟುಂಬದವರಿಗೆ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸೌಲಭ್ಯ ಲಭ್ಯ.

ಅಗತ್ಯ ದಾಖಲೆಗಳು

· ಆಧಾರ್ ಕಾರ್ಡ್ (ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು).
· ಜಾತಿ ಮತ್ತು ಆದಾಯ ಪ್ರಮಾಣಪತ್ರ.
· ಬಿಪಿಎಲ್ ಪಡಿತರ ಚೀಟಿ.
· ಬ್ಯಾಂಕ್ ಪಾಸ್ಬುಕ್ ಪ್ರತಿ (ಆಧಾರ್ ಸೀಡಿಂಗ್ ಆಗಿರಬೇಕು).
· ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ.
· ನಿವಾಸ ಪ್ರಮಾಣಪತ್ರ.
· ಎಲ್ಲಾ ದಾಖಲೆಗಳಲ್ಲಿ ಅರ್ಜಿದಾರರ ಹೆಸರು ಒಂದೇ ರೀತಿ ಇರುವುದನ್ನು.

ಅರ್ಜಿ ಸಲ್ಲಿಸುವ ವಿಧಾನ

· ಆನ್‌ಲೈನ್ ಮೂಲಕ: ಅಧಿಕೃತ ಸೇವಾ ಸಿಂಧು ಪೋರ್ಟಲ್ (sevaone.karnataka.gov.in) ಗೆ ಭೇಟಿ ನೀಡಿ, ಲಾಗಿನ್ ಆಗಿ, ಯೋಜನೆ ಆಯ್ಕೆ ಮಾಡಿ ಅರ್ಜಿ ಸಲ್ಲಿಸಿ.
· ಆಫ್ಲೈನ್ ಮೂಲಕ: ನಿಮ್ಮ ಹತ್ತಿರದ ಗ್ರಾಮ ಒನ್ / ಕರ್ನಾಟಕ ಒನ್ / ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ನೀವು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಯನ್ನು ಸಂಪರ್ಕಿಸಬಹುದು.

ಅರ್ಹತೆಯ ವಿಸ್ತೃತ ವಿವರ

· ಸಮುದಾಯ ಮತ್ತು ಲಿಂಗ: ಅರ್ಜಿದಾರರು ಮಹಿಳೆ ಹಾಗೂ ಕರ್ನಾಟಕ ವಿಶ್ವಕರ್ಮ ಸಮುದಾಯ ಅಥವಾ ಅದರ ಉಪಜಾತಿಗೆ ಸೇರಿರಬೇಕು.
· ವಯಸ್ಸು: 18 ರಿಂದ 55 ವರ್ಷಗಳ ಒಳಗಿರಬೇಕು.
· ಆದಾಯ: ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ ₹98,000 ಮತ್ತು ನಗರದಲ್ಲಿ ₹1,20,000 ಮೀರಬಾರದು.
· ಅನುಭವ: ಹೊಲಿಗೆ ವೃತ್ತಿಯಲ್ಲಿ ಅನುಭವವನ್ನು ಹೊಂದಿರುವುದು ಅವಶ್ಯಕ.
· ಇತರೆ: ಈ ಹಿಂದೆ ನಿಗಮದ ಯಾವುದೇ ಯೋಜನೆಯಲ್ಲಿ ಪ್ರಯೋಜನ ಪಡೆದವರು ಅಥವಾ ಅವರ ಕುಟುಂಬದವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಿಲ್ಲ.

ಸಂಪರ್ಕ ಮಾಹಿತಿ

· ದೂರವಾಣಿ ಸಂಖ್ಯೆಗಳು: 080-22374848, 7899899039.
· ಸಹಾಯವಾಣಿ: 080-22374832, 8050770004.
· ಅಧಿಕೃತ ವೆಬ್‌ಸೈಟ್: bcwdcorporations.karnataka.gov.in.

ಪ್ರಮುಖ ಸೂಚನೆಗಳು

· ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 24, 2026.
· ಆಯ್ಕೆ ಪ್ರಕ್ರಿಯೆ: ಅರ್ಜಿಗಳ ಪರಿಶೀಲನೆಯ ನಂತರ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ.ನಿಗಮವು ಯಾವುದೇ ಕಾರಣ ನೀಡದೆ ಅರ್ಜಿಯನ್ನು ತಿರಸ್ಕರಿಸುವ ಹಕ್ಕನ್ನು ಕಾಯ್ದಿರಿಸಿದೆ.
· ಮೋಸದಿಂದ ದೂರವಿರಿ: ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಶುಲ್ಕವಿಲ್ಲ. ಅಧಿಕೃತ ವೆಬ್‌ಸೈಟ್ ಅಥವಾ ಸರ್ಕಾರಿ ಕೇಂದ್ರಗಳ ಮೂಲಕವೇ ಅರ್ಜಿ ಸಲ್ಲಿಸಿ.

DOWNLOAD LINK

👑

JOIN OUR COMMUNITY

✈️
Get Latest Updates, News, Offers & More
ಜಾಹೀರಾತು
ಮುಖ್ಯ ಸಂಪಾದಕರು (Chief Editor) ✍️ 7 ಲೇಖನಗಳು

Ambika

Ambika ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment