ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನಿರುದ್ಯೋಗಿ ಯುವಕರಿಗೆ ಬಂಪರ್ ಅವಕಾಶ ನೀಡಿದೆ. ಬ್ಯಾಂಕ್ ದೇಶಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ಖಾಲಿಯಿರುವ ಲೋಕಲ್ ಬ್ಯಾಂಕ್ ಅಧಿಕಾರಿ (LBO) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ
ಅಧಿಸೂಚನೆಯ ಅಡಿಯಲ್ಲಿ ಒಟ್ಟು 750 ಲೋಕಲ್ ಬ್ಯಾಂಕ್ ಅಧಿಕಾರಿ (LBO) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ನವೆಂಬರ್ 3 ರಂದು ಪ್ರಾರಂಭವಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 23.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
PNB LBO ಹುದ್ದೆಗಳ ವೇತನ ಮತ್ತು ವಯಸ್ಸಿನ ಮಿತಿ ವಿವರ
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನಲ್ಲಿ ಸ್ಥಳೀಯ ಬ್ಯಾಂಕ್ ಅಧಿಕಾರಿ (LBO) ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ದೊರೆಯುವ ಆರ್ಥಿಕ ಮತ್ತು ವಯೋಮಿತಿ ವಿವರಗಳು ಹೀಗಿವೆ:
ವೇತನದ ವಿವರ
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ಭತ್ಯೆಗಳೊಂದಿಗೆ ಮಾಸಿಕ ₹48,480 ರಿಂದ ₹85,920 ರವರೆಗಿನ ವೇತನ ದೊರೆಯಲಿದೆ.
ನೇಮಕಾತಿಯ ಉದ್ದೇಶ: ರಾಜ್ಯಗಳಾದ್ಯಂತ ಸ್ಥಳೀಯ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವ ಮೂಲಕ ಬ್ಯಾಂಕಿನ ಪ್ರಾದೇಶಿಕ ವ್ಯಾಪ್ತಿಯನ್ನು ಬಲಪಡಿಸುವುದು ಈ ನೇಮಕಾತಿಯ ಪ್ರಾಥಮಿಕ ಉದ್ದೇಶವಾಗಿದೆ.
ವಯಸ್ಸಿನ ಮಿತಿ:
ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 20 ವರ್ಷಗಳು ಮತ್ತು ಗರಿಷ್ಠ ವಯಸ್ಸು 30 ವರ್ಷಗಳು. ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ, ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ:
SC/ST/ ಅಂಗವಿಕಲ ಅಭ್ಯರ್ಥಿಗಳಿಗೆ ₹59/-ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ₹1180/
ಶೈಕ್ಷಣಿಕ ಅರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಭಾರತದಲ್ಲಿ ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಮತ್ತು ಇತರ ನಿಗದಿತ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು.
PNB ಲೋಕಲ್ ಬ್ಯಾಂಕ್ ಅಧಿಕಾರಿ (LBO) ಹುದ್ದೆಗಳ ಆಯ್ಕೆ ಪ್ರಕ್ರಿಯೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನಲ್ಲಿ ಲೋಕಲ್ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಈ ಕೆಳಗಿನ ಹಂತಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ:
ಲಿಖಿತ ಪರೀಕ್ಷೆ (Written Exam)
ಸ್ಕ್ರೀನಿಂಗ್ ಪರೀಕ್ಷೆ (Screening Test)
ಸ್ಥಳೀಯ ಭಾಷಾ ಪರೀಕ್ಷೆ (Local Language Test)
ಸಂದರ್ಶನ (Interview)
PNB LBO ಹುದ್ದೆಗೆ ಲಿಖಿತ ಪರೀಕ್ಷೆಯ ಸ್ವರೂಪ (Written Exam Pattern)
PNB ಲೋಕಲ್ ಬ್ಯಾಂಕ್ ಅಧಿಕಾರಿ ಹುದ್ದೆಗೆ ನಡೆಸುವ ಲಿಖಿತ ಪರೀಕ್ಷೆಯು ಒಟ್ಟು 150 ಅಂಕಗಳನ್ನು ಒಳಗೊಂಡಿರುತ್ತದೆ ಮತ್ತು 150 ಬಹು-ಆಯ್ಕೆಯ ಪ್ರಶ್ನೆಗಳನ್ನು (MCQs) ಹೊಂದಿರುತ್ತದೆ. ಪ್ರತಿ ಪ್ರಶ್ನೆಗೆ ಒಂದು ಅಂಕ ನಿಗದಿಯಾಗಿರುತ್ತದೆ. ಈ ಪರೀಕ್ಷೆಯಲ್ಲಿ ಈ ಕೆಳಗಿನ ಪ್ರಮುಖ ವಿಷಯಗಳನ್ನು ಒಳಗೊಂಡಿರುತ್ತದೆ:
ರೀಸನಿಂಗ್ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್ (Reasoning and Computer Aptitude)
ಡೇಟಾ ಅನಾಲಿಸಿಸ್ (Data Analysis)
ಇಂಗ್ಲಿಷ್ (English)
ಸಾಮಾನ್ಯ ಜಾಗೃತಿ (General Awareness)
ಪರೀಕ್ಷೆಯಲ್ಲಿ ಋಣಾತ್ಮಕ ಅಂಕ (Negative Marking) ಇರುತ್ತದೆ. ಪ್ರತಿ ತಪ್ಪು ಉತ್ತರಕ್ಕೂ ಅಂಕದ ನಾಲ್ಕನೇ ಒಂದು ಭಾಗದಷ್ಟು (0.25) ಅಂಕ ಕಡಿತಗೊಳಿಸಲಾಗುತ್ತದೆ
ರಾಜ್ಯವಾರು ಖಾಲಿ ಹುದ್ದೆಗಳ ವಿವರಗಳು ಹೀಗಿವೆ..
ಆಂಧ್ರಪ್ರದೇಶದಲ್ಲಿ ಹುದ್ದೆಗಳ ಸಂಖ್ಯೆ: 05
ಗುಜರಾತ್ನಲ್ಲಿ ಹುದ್ದೆಗಳ ಸಂಖ್ಯೆ: 95
ಕರ್ನಾಟಕದಲ್ಲಿ ಹುದ್ದೆಗಳ ಸಂಖ್ಯೆ: 85
ಮಹಾರಾಷ್ಟ್ರದಲ್ಲಿ ಹುದ್ದೆಗಳ ಸಂಖ್ಯೆ: 135
ತೆಲಂಗಾಣದಲ್ಲಿ ಹುದ್ದೆಗಳ ಸಂಖ್ಯೆ: 88
ತಮಿಳುನಾಡಿನಲ್ಲಿ ಹುದ್ದೆಗಳ ಸಂಖ್ಯೆ: 85
ಪಶ್ಚಿಮ ಬಂಗಾಳದಲ್ಲಿ ಹುದ್ದೆಗಳ ಸಂಖ್ಯೆ: 90
ಜಮ್ಮು ಮತ್ತು ಕಾಶ್ಮೀರದಲ್ಲಿ ಹುದ್ದೆಗಳ ಸಂಖ್ಯೆ: 20
ಲಡಾಖ್ನಲ್ಲಿ ಹುದ್ದೆಗಳ ಸಂಖ್ಯೆ: 03
ಅರುಣಾಚಲ ಪ್ರದೇಶದಲ್ಲಿ ಹುದ್ದೆಗಳ ಸಂಖ್ಯೆ: 05
ಅಸ್ಸಾಂನಲ್ಲಿ ಹುದ್ದೆಗಳ ಸಂಖ್ಯೆ: 86
ಮಣಿಪುರದಲ್ಲಿ ಹುದ್ದೆಗಳ ಸಂಖ್ಯೆ: 08
ಮೇಘಾಲಯದಲ್ಲಿ ಹುದ್ದೆಗಳ ಸಂಖ್ಯೆ: 08
ಮಿಜೋರಾಂನಲ್ಲಿ ಹುದ್ದೆಗಳ ಸಂಖ್ಯೆ: 05
ನಾಗಾಲ್ಯಾಂಡ್ನಲ್ಲಿ ಹುದ್ದೆಗಳ ಸಂಖ್ಯೆ: 05
ಸಿಕ್ಕಿಂನಲ್ಲಿ ಹುದ್ದೆಗಳ ಸಂಖ್ಯೆ: 05
ತ್ರಿಪುರದಲ್ಲಿ ಹುದ್ದೆಗಳ ಸಂಖ್ಯೆ: 22
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ಅನುಭವ. ಅಭ್ಯರ್ಥಿಗಳು ಆಯಾ ರಾಜ್ಯದ ಸ್ಥಳೀಯ ಭಾಷೆಯನ್ನು ಓದುವುದು, ಬರೆಯುವುದು ಮತ್ತು ಮಾತನಾಡುವುದರಲ್ಲಿ ಪ್ರವೀಣರಾಗಿರಬೇಕು. ಅಲ್ಲದೆ, ಅಭ್ಯರ್ಥಿಗಳ ವಯಸ್ಸಿನ ಮಿತಿ 20 ರಿಂದ 30 ವರ್ಷಗಳ ನಡುವೆ ಇರಬೇಕು. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ವಯಸ್ಸಿನ ಮಿತಿಯಲ್ಲಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳವರೆಗೆ ಸಡಿಲಿಕೆ ಇದೆ. ಈ ಅರ್ಹತೆಗಳನ್ನು ಹೊಂದಿರುವ ಯಾರಾದರೂ ನವೆಂಬರ್ 23, 2025 ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.