ಬೆಂಗಳೂರಿನಲ್ಲಿ ಅರ್ಧ ಗಂಟೆ ಸುರಿದ ಮಳೆಗೆ ಬಿದ್ದ 25 ಮರಗಳು .

ಬೆಂಗಳೂರಿನಲ್ಲಿ ಅರ್ಧ ಗಂಟೆ ಸುರಿದ ಮಳೆಗೆ ಬಿದ್ದ 25 ಮರಗಳು .
Spread the love

ಜಸ್ಟ್ ಅರ್ಧಗಂಟೆ ಸುರಿದ ಮಳೆ ಬೆಂಗಳೂರನ್ನೇ ಅಲ್ಲಾಡಿಸಿದೆ. ಒಂದು ಕಡೆ ಅಂಡರ್‌ಪಾಸ್‌ಗಳು ಜಲಾವೃತಗೊಂಡರೆ, ಮತ್ತೊಂದೆಡೆ 25ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ವಾನಹ ಸವಾರರು ಪರದಾಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಆನೇಕಲ್‌ ಭಾಗದಲ್ಲೂ ಬಿರುಗಾಳಿ ಹಾಗೂ ಆಲಿಕಲ್ಲು ಸಹಿತ ಮಳೆ ಆಗಿದೆ.

ಸೂರ್ಯಸಿಟಿಯಲ್ಲಿ ಆಸ್ಪತ್ರೆಯ ಶೀಟ್‌ಗಳೇ ಹಾರಿ ಹೋಗಿವೆ.

ಬೆಂಗಳೂರು, ಮೇ 06: ಮೂರು ದಿನಗಳ ಬಳಿಕ ಇಂದು ಮತ್ತೆ ಬೆಂಗಳೂರಿಗೆ ವರುಣನ (Rain) ಆಗಮನವಾಗಿತ್ತು. ಸಂಜೆಯಾಗ್ತಿದ್ದಂತೆ ಮಳೆರಾಯನ ದರ್ಶನ ಆಗಿತ್ತು. ಅದು ಅಂತಿಂಥ ಮಳೆ ಅಲ್ಲ, ಜೋರುಗಾಳಿ, ಆಲಿಕಲ್ಲುನೊಂದಿಗೆ ಆರಂಭವಾದ ಮಳೆ ಬೆಂಗಳೂರನ್ನ (Bangaluru) ತಂಪು ಮಾಡುವುದರೊಂದಿಗೆ ಹತ್ತಾರು ಅವಾಂತರಗಳನ್ನು ಕೂಡ ಸೃಷ್ಟಿಸಿದೆ. ಜಸ್ಟ್ ಅರ್ಧಗಂಟೆ ಸುರಿದ ಮಳೆ ಬೆಂಗಳೂರನ್ನೇ ಅಲ್ಲಾಡಿಸಿದೆ. ಒಂದು ಕಡೆ ಅಂಡರ್‌ಪಾಸ್‌ಗಳು ಜಲಾವೃತಗೊಂಡರೆ, ಮತ್ತೊಂದೆಡೆ 25ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ವಾನಹ ಸವಾರರು ಪರದಾಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

 

25ಕ್ಕೂ ಹೆಚ್ಚು ಭಾಗದಲ್ಲಿ ಧರೆಗೆ ಉರುಳಿದ ಮರಗಳು

 

ಅರ್ಧಗಂಟೆ ಬಂದ ಮಳೆಗೆ ನಗರದಲ್ಲಿ 25ಕ್ಕೂ ಹೆಚ್ಚು ಭಾಗದಲ್ಲಿ ಮರಗಳು ಧರೆಗೆ ಉರುಳಿವೆ. ನಗರದ ಜಯನಗರ, ಬಸವನಗುಡಿ, ಮಲ್ಲೆಶ್ವರಂ, ಕೋರಮಂಗಲ, ಬಿಟಿಎಂ ಲೇಔಟ್, ಯಶವಂತರಪುರ ಸೇರದಿಂತೆ ಹಲವೆಡೆ ಮರಗಳು ಧರೆಗೆ ಉರುಳಿವೆ. ದೂರು ಬಂದ ನಗರಗಳಲ್ಲಿ ಮರಗಳನ್ನು ಬಿಬಿಎಂಪಿ ಸಿಬ್ಬಂದಿಗಳು ತೆರೆವುಗೊಳಿಸಿದ್ದಾರೆ ಎಂದು ಬಿಬಿಎಂಪಿ ಕಂಟ್ರೋಲ್ ರೂಮ್ ಇಂದ ಮಾಹಿತಿ ನೀಡಲಾಗಿದೆ.

ಆನೇಕಲ್‌ನಲ್ಲಿ ಆಲಿಕಲ್ಲು ಮಳೆ: ಬಿರುಗಾಳಿಗೆ ಕಿತ್ತು ಹೋದ ಶೀಟ್‌ಗಳು!

 

ಇನ್ನು ಆನೇಕಲ್‌ ಭಾಗದಲ್ಲೂ ಬಿರುಗಾಳಿ ಹಾಗೂ ಆಲಿಕಲ್ಲು ಸಹಿತ ಮಳೆ ಆಗಿದೆ. ಸೂರ್ಯಸಿಟಿಯಲ್ಲಿ ಆಸ್ಪತ್ರೆಯ ಶೀಟ್‌ಗಳೇ ಹಾರಿ ಹೋಗಿವೆ. ಪಾರ್ಕಿಂಗ್‌ನಲ್ಲಿದ್ದ ಕಾರುಗಳು ಜಖಂಗೊಂಡಿವೆ. ಆನೇಕಲ್‌ ತಾಲೂಕಿನ ಬನಹಳ್ಳಿಯಲ್ಲಿ 10 ಕ್ಕೂ ಹೆಚ್ಚು ಮನೆಗಳ ಶೀಟ್‌ಗಳು ಹಾರಿ ಹೋಗಿದ್ದು, ಸಿಮೆಂಟ್‌ ಬ್ರಿಕ್ಸ್‌ಗಳು ಕೂಡಾ ನೆಲಕ್ಕುರುಳಿವೆ. ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದಾರೆ.

 

Comments

No comments yet. Why don’t you start the discussion?

Leave a Reply

Your email address will not be published. Required fields are marked *