ದಕ್ಷಿಣಕನ್ನಡ ಜಿಲ್ಲೆ : 18 ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ; 435 ವಿದ್ಯಾರ್ಥಿಗಳು ಗೈರು.

ದಕ್ಷಿಣಕನ್ನಡ ಜಿಲ್ಲೆ : 18 ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ; 435 ವಿದ್ಯಾರ್ಥಿಗಳು ಗೈರು.
Spread the love

ಮಂಗಳೂರು : ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗೆ ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯು ರವಿವಾರ ದ.ಕ.ಜಿಲ್ಲೆಯ 18 ಕೇಂದ್ರಗಳಲ್ಲಿ ಸುಸೂತ್ರವಾಗಿ ನಡೆದಿದೆ. ಹೊರ ಜಿಲ್ಲೆಯ ಸಾಕಷ್ಟು ಮಂದಿ ವಿದ್ಯಾರ್ಥಿಗಳು ಕೂಡ ಈ ಕೇಂದ್ರಗಳಲ್ಲಿ ಬಂದು ಪರೀಕ್ಷೆ ಬರೆದಿರುವುದು ಗಮನಾರ್ಹ.

ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದ 9,670 ವಿದ್ಯಾರ್ಥಿಗಳ ಪೈಕಿ 9,235 ವಿದ್ಯಾರ್ಥಿಗಳು ಹಾಜರಾಗಿದ್ದರೆ, 435 ಮಂದಿ ಗೈರಾಗಿದ್ದಾರೆ.

 

ನಗರದ ಮೇರಿಹಿಲ್‌ನ ಮೌಂಟ್ ಕಾರ್ಮೆಲ್ ಶಾಲೆ, ಅಡ್ಯಾರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು, ನಗರದ ಎಂಜಿ ರೋಡ್‌ನಲ್ಲಿರುವ ಬೆಸೆಂಟ್ ಕಾಲೇಜು, ಜೆಪ್ಪುವಿನಲ್ಲಿರುವ ಯೆನೆಪೊಯ ಕಾಲೇಜು, ದೇರಳಕಟ್ಟೆಯ ಕಣಚೂರು ಇನ್ಸ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಮೂಡುಬಿದಿರೆಯ ಆಳ್ವಾಸ್ ಕಾಲೇಜು, ವಳಚ್ಚಿಲ್‌ನ ಶ್ರೀನಿವಾಸ್ ಕಾಲೇಜು, ಕೊಡಿಯಾಲ್‌ಬೈಲ್‌ನ ಕೆನರಾ ಪಿಯು ಕಾಲೇಜು, ಸುರತ್ಕಲ್‌ನ ಗೋವಿಂದಾಸ ಪಿಯು ಕಾಲೇಜು, ಹಳೆಯಂಗಡಿಯ ಡಾ.ಎಂ.ರಾಮಣ್ಣ ಶೆಟ್ಟಿ ಮೆಮೋರಿಯಲ್ ಇಂಗ್ಲಿಷ್ ಮಿಡಿಯಂ ಸ್ಕೂಲ್, ಸುರತ್ಕಲ್‌ನ ಎನ್‌ಐಟಿಕೆ ಇಂಗ್ಲಿಷ್ ಮಿಡಿಯಂ ಸ್ಕೂಲ್, ಕೆಂಜಾರಿನ ಶ್ರೀದೇವಿ ಕಾಲೇಜು, ಅಶೋಕ ನಗರದಲ್ಲಿರುವ ಎಸ್‌ಡಿಎಂ ಸ್ಕೂಲ್, ಕಾವೂರಿನ ಬಿಜಿಎಸ್ ಶಾಲೆ, ಡೊಂಗರಕೇರಿಯ ಕೆನರಾ ಸಿಬಿಎಸ್‌ಇ ಹೈಸ್ಕೂಲ್, ಬಿಜೈಯ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್, ಯೆಯ್ಯಾಡಿಯ ಶ್ರೀರವಿಶಂಕರ ವಿದ್ಯಾ ಮಂದಿರ ಶಾಲೆ, ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ನೀಟ್ ಪರೀಕ್ಷೆಗಳು ಯಾವುದೇ ಅಡೆತಡೆಗಳಿ ಲ್ಲದೆ ಮಧ್ಯಾಹ್ನ 2ರಿಂದ ಸಂಜೆ 5:20ರ ತನಕ ನಡೆಯಿತು.

 

ನೀಟ್ ಪರೀಕ್ಷಾ ಸೆಂಟರ್‌ಗಳಲ್ಲಿ ವಿದ್ಯಾರ್ಥಿಗಳ ಹಾಲ್ ಟಿಕೆಟ್ ಹಾಗೂ ಐಡಿ ದಾಖಲೆಯನ್ನು ಕಾಲೇಜಿನ ಗೇಟ್‌ನಲ್ಲಿಯೇ ಪರಿಶೀಲಿಸಿ ಒಳಗೆ ಬಿಡಲಾಯಿತು. ಇನ್ನೂ ವಿದ್ಯಾರ್ಥಿಗಳಿಗೆ ಇಲೆಕ್ಟ್ರಾನಿಕ್ ವಸ್ತುಗಳಾದ ಮೊಬೈಲ್ ಫೋನ್, ಬ್ಲೂಟೂತ್, ಕ್ಯಾಲ್ಕುಲೇಟರ್, ಗಡಿಯಾರ, ಇಯರ್ ಫೋನ್, ಮೈ ಮೇಲೆ ಧರಿಸುವ ಆಭರಣಗಳಿಗೆ ಪರೀಕ್ಷೆಯಲ್ಲಿ ನಿರ್ಬಂಧ ವಿಧಿಸಲಾಗಿತ್ತು.

Comments

No comments yet. Why don’t you start the discussion?

Leave a Reply

Your email address will not be published. Required fields are marked *