ವಾಟ್ಸಪ್ ಹೋದರೆ ಬೇರೆ ಯಾವ Appಗಳು ಇದೆ ?

ವಾಟ್ಸಪ್ ಹೋದರೆ ಬೇರೆ ಯಾವ Appಗಳು ಇದೆ ?
Spread the love

ಐಟಿ ನಿಯಮಗಳನ್ನು ಹೇರಲು ಬಂದರೆ ಭಾರತದಿಂದಲೇ ಹೊರ ಹೋಗುವುದಾಗಿ ವಾಟ್ಸಾಪ್ ಎಚ್ಚರಿಕೆ ನೀಡಿದೆ. ತನಗೆ ಬಳಕೆದಾರರ ಪ್ರೈವೆಸಿ ಕಾಪಾಡುವುದು ಹೆಚ್ಚು ಮುಖ್ಯ ಎಂದು ವಾಟ್ಸಾಪ್ ಹೇಳಿದೆ. ಒಂದು ವೇಳೆ ವಾಟ್ಸಾಪ್ ನಿರ್ಗಮಿಸಿದರೆ ಭಾರತೀಯರಿಗೆ ಬೇರೆ ಯಾವ ಮೆಸೇಜಿಂಗ್ ಆಯಪ್ಗಳ ಅವಕಾಶ ಇದೆ?ಈ ಬಗ್ಗೆ ಒಂದು ವರದಿ ಇಲ್ಲಿದೆ.

 

ವಾಟ್ಸಾಪ್ ಭಾರತದಿಂದ ನಿರ್ಗಮಿಸುವುದಾಗಿ ಹೇಳಿದೆ. ನಾಡಿನ ಕಾನೂನು ಕಟ್ಟಳೆಗಿಂತ ತನ್ನ ಬಳಕೆದಾರರ ಗೌಪ್ಯತೆ ಕಾಪಾಡುವುದು ಮುಖ್ಯ ಎನ್ನುವುದು ವಾಟ್ಸಾಪ್ನ ಮಾಲಕ ಸಂಸ್ಥೆ ಮೆಟಾದ (Meta) ಧೋರಣೆ. ಅಂತೆಯೇ ಭಾರತದ ಇತ್ತೀಚಿನ ಐಟಿ ನಿಯಮಗಳ ವಿರುದ್ಧ ವಾಟ್ಸಾಪ್ ನ್ಯಾಯಾಲಯದ ಮೊರೆ ಹೋಗಿದೆ. ಸಂದೇಶಗಳನ್ನು ಎನ್ಕ್ರಿಪ್ಟ್ ಮಾಡಲಾಗುತ್ತದೆಯಾದ್ದರಿಂದ ಅದರ ಮೂಲ ಶೋಧಿಸಲು ಆಗುವುದಿಲ್ಲ. ಎನ್ಕ್ರಿಪ್ಷನ್ ವ್ಯವಸ್ಥೆ ತೆಗೆದುಹಾಕುವುದಿಲ್ಲ ಎಂದು ವಾಟ್ಸಾಪ್ ಹೇಳಿದ್ದು, ಒಂದು ವೇಳೆ ಬಲವಂತ ಮಾಡಿದರೆ ಭಾರತದಿಂದಲೇ ನಿರ್ಗಮಿಸುವುದಾಗಿ ಹೇಳಿದೆ. ಒಂದು ವೇಳೆ ವಾಟ್ಸಾಪ್ ಭಾರತದಲ್ಲಿ ಅಲಭ್ಯವಾದರೆ ಪರ್ಯಾಯವಾಗಿರುವ ಮೆಸೇಜಿಂಗ್ ಆಯಪ್ಗಳು ಯಾವುವಿವೆ? ಲಭ್ಯ ಇರುವ ವಾಟ್ಸಪೇತರ ಐದು ಆಯಪ್ಗಳ ಪರಿಚಯ ಇಲ್ಲಿದೆ:

ಟೆಲಿಗ್ರಾಂ ಮೆಸೆಂಜರ್

 

ಬಳಕೆದಾರರ ಪ್ರೈವಸಿ ವಿಚಾರದಲ್ಲಿ ವಾಟ್ಸಾಪ್ಗಿಂತ ಟೆಲಿಗ್ರಾಂ ಹೆಚ್ಚು ಬದ್ಧವಾಗಿದೆ. ಇದೇ ಕಾರಣಕ್ಕೆ ಟೆಲಿಗ್ರಾಂಗೆ ನಿಷ್ಠಾವಂತರ ಬಳಕೆದಾರರ ಬಳಗ ನಿರ್ಮಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ಇದರ ಜನಪ್ರಿಯತೆ ಹೆಚ್ಚುತ್ತಿದೆ. ಎರಡು ಲಕ್ಷ ಸದಸ್ಯರನ್ನು ಒಳಗೊಳ್ಳಬಹುದಾದ ಗ್ರೂಪ್ ಕ್ರಿಯೇಟ್ ಮಾಡಬಹುದು. ದೊಡ್ಡ ಗಾತ್ರ ಫೈಲ್ಗಳನ್ನು ಕಳುಹಿಸಬಹುದು. ಇನ್ನೂ ಹಲವು ವಿಶೇಷ ಫೀಚರ್ಸ್ ಟೆಲಿಗ್ರಾಂನಲ್ಲಿವೆ.

 

ದೇಶ ಬಿಟ್ಟು ಹೋಗುತ್ತೇವೆ ಹೊರತು ಗೌಪ್ಯತೆ ಮಾತ್ರ ಬಿಡಲ್ಲ: ವಾಟ್ಸಾಪ್ ಹಠಕ್ಕೇನು ಕಾರಣ?

 

ಹೈಕ್ ಸ್ಟಿಕರ್ ಚ್ಯಾಟ್

 

ಹೈಕ್ ಭಾರತದ್ದೇ ಆದ ಮೆಸೇಜಿಂಗ್ ಆಯಪ್. ರಸವತ್ತಾಗಿ ಸಂವಾದ ನಡೆಸಲು ನಾನಾ ರೀತಿಯ ಸ್ಟಿಕ್ ಪ್ಯಾಕ್ಗಳನ್ನು ಹೊಂದಿದೆ. ಮೆಸೇಜಿಂಗ್ ಅಲ್ಲದೇ ಕ್ರಿಕೆಟ್ ಸ್ಕೋರ್, ಡಿಜಿಟಲ್ ವ್ಯಾಲಟ್ ಇತ್ಯಾದಿ ಸೇವೆಗಗಳು ಹೈಕ್ನಲ್ಲಿವೆ.

ಜಿಯೋ ಚ್ಯಾಟ್

ಜಿಯೋಚ್ಯಾಟ್ ಮತ್ತೊಂದು ಉತ್ತಮ ಪರ್ಯಾಯ ಮೆಸೇಜಿಂಗ್ ಆಯಪ್. ವಿಡಿಯೋ ಕಾನ್ಫರೆನ್ಸಿಂಗ್, ವಾಯ್ಸ್ ಕಾಲ್, ಫೈಲ್ ಶೇರಿಂಗ್ ಇತ್ಯಾದಿ ಫೀಚರ್ಸ್ ಹೊಂದಿದೆ.

ಸೋನು ಸೂದ್ ವಾಟ್ಸಾಪ್ ಖಾತೆ ಬ್ಲಾಕ್; ಈ ತಪ್ಪು ಮಾಡಿದರೆ ನಿಮಗೂ ಇದೇ ಗತಿ

ಸಿಗ್ನಲ್

ಸಿಗ್ನಲ್ ಆಯಪ್ ತನ್ನ ಬಳಕೆದಾರರ ಪ್ರೈವೆಸಿ ರಕ್ಷಣೆಯಲ್ಲಿ ಟೆಲಿಗ್ರಾಂಗಿಂತ ಒಂದು ಹೆಜ್ಜೆ ಮುಂದು. ಇದು ಪರಿಣಾಮಕಾರಿ ಹಾಗೂ ಸರಳ ಎನಿಸುವ ಆಯಪ್ ಆಗಿದೆ. ಜಾಗತಿಕವಾಗಿ ಇದು ಮನ್ನಣೆ ಪಡೆಯುತ್ತಿದೆ.

ಸ್ಕೈಪ್

ಮೂಲತಃ ವಿಡಿಯೋ ಕಾಲಿಂಗ್​ಗೆಂದು ರೂಪಿಸಲಾಗಿದ್ದ ಸ್ಕೈಪ್ ಈಗ ಮೆಸೇಜಿಂಗ್ ಸರ್ವಿಸ್ ಕೂಡ ನೀಡುತ್ತದೆ. ಕಾರ್ಪೊರೇಟ್ ವಲಯದಲ್ಲೂ ಸ್ಕೈಪ್​ಗೆ ಪ್ರಾಧಾನ್ಯತೆ ಇದೆ.

Comments

No comments yet. Why don’t you start the discussion?

Leave a Reply

Your email address will not be published. Required fields are marked *