MI vs KKR : ನಿನ್ನೆ ನಡೆದ ಮುಂಬೈ ಮತ್ತು ಕೊಲ್ಕತ್ತಾ ಪಂದ್ಯದಲ್ಲಿ ಮತ್ತೆ ಮುಂಬೈ ವಿರುದ್ಧ ಕೇಳಿ ಬಂದ ಟಾಸ್ ಫಿಕ್ಸಿಂಗ್ ಆರೋಪ..!

MI vs KKR : ನಿನ್ನೆ ನಡೆದ ಮುಂಬೈ ಮತ್ತು ಕೊಲ್ಕತ್ತಾ ಪಂದ್ಯದಲ್ಲಿ ಮತ್ತೆ ಮುಂಬೈ ವಿರುದ್ಧ ಕೇಳಿ ಬಂದ ಟಾಸ್ ಫಿಕ್ಸಿಂಗ್ ಆರೋಪ..!
Spread the love

ಈ ಬಾರಿಯ ಐಪಿಎಲ್ನಲ್ಲಿ(IPL 2024) ಮುಂಬೈ ಇಂಡಿಯನ್ಸ್(MI vs KKR) ತಂಡ ತವರಿನಲ್ಲಿ ಪಂದ್ಯವನ್ನಾಡುವ ವೇಳೆ ತನಗೆ ಅನುಕೂಲವಾಗುವಂತೆ ಟಾಸ್ ಫಿಕ್ಸಿಂಗ್ಸ್ ಮಾಡುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು. ಇದಕ್ಕೆ ಕಾರಣ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ(Hardik Pandya) ಟಾಸ್ ಕಾಯಿನ್ ದೂರಕ್ಕೆ ಹಾರಿಸುವ ಮೂಲಕ ಬಳಿಕ ಎದುರಾಳಿ ನಾಯಕ ಇದನ್ನು ನೋಡುವ ಮುನ್ನವೇ ಮ್ಯಾಚ್ ರೆಫ್ರಿ ಕಾಯಿನ್ ಹೆಕ್ಕಿ ಮುಂಬೈ ಟಾಸ್ ಗೆದ್ದಿದೆ ಎಂದು ಹೇಳಿದ್ದರು.

ಈ ಘಟನೆ ಬಗ್ಗೆ ಭಾರೀ ಚರ್ಚೆಯಾಗಿತ್ತು ಮತ್ತು ಆರ್ಸಿಬಿ ನಾಯಕ ಫಾರ್ಫ್ ಡುಪ್ಲೆಸಿಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಈ ಪ್ಯಾಟ್ ಕಮಿನ್ಸ್ ಜತೆ ಈ ಘಟನೆಯನ್ನು ವಿವರಿಸಿದ್ದರು. ಇದರ ವಿಡಿಯೊ ಕೂಡ ವೈರಲ್(viral video) ಆಗಿತ್ತು.

 

ಮುಂಬೈ ಫ್ರಾಂಚೈಸಿ ವಿರುದ್ಧ ಅನೇಕ ಆರೋಪ ಕೇಳಿ ಬಂದ ಬಳಿಕ ಐಪಿಎಲ್ ಆಡಳಿತ ಮಂಡಳಿ ಎಲ್ಲ ಪಂದ್ಯಗಳ ಟಾಸ್ ಕಾಯಿನ್ ಕ್ಯಾಮೆರಾದ ಮೂಲಕ ಝೂಮ್ ಮಾಡಿ ತೋರಿಸಿದ ಬಳಿಕವೇ ಮ್ಯಾಚ್ ರೆಫ್ರಿ ನಾಣ್ಯವನ್ನು ಹೆಕ್ಕುತ್ತಿದ್ದರು. ಆದರೆ, ಶುಕ್ರವಾರ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಇದು ಕಂಡು ಬರಲಿಲ್ಲ. ಹೀಗಾಗಿ ಮತ್ತೆ ಮುಂಬೈ ವಿರುದ್ಧ ಟಾಸ್ ಫಿಕ್ಸಿಂಗ್ ಆರೋಪ ಕೇಳಿಬಂದಿದೆ.

ಹೌದು, ಹಾರ್ದಿಕ್ ಪಾಂಡ್ಯ ಟಾಸ್ ನಾಣ್ಯವನ್ನು ದೂರಕ್ಕೆ ಚಿಮ್ಮಿಸಿದರು. ಇದನ್ನು ಕ್ಯಾಮರದಲ್ಲಿ ತೋರಿಸುವ ಮುನ್ನವೇ ಮ್ಯಾಚ್ ರೆಫ್ರಿ ಪಂಕಜ್ ಧರ್ಮನಿ ನಾಣ್ಯವನ್ನು ಹೆಕ್ಕಿ ಟಾಸ್ ಮುಂಬೈ ಗೆದ್ದಿದೆ ಎಂದು ಹೇಳಿದರು. ಇದು ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ. ಮ್ಯಾಚ್ ರೆಫರಿ ಮತ್ತೊಮ್ಮೆ ಮುಂಬೈಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಬಳಿಕ ಅನೇಕ ನೆಟ್ಟಿಗರು ಮುಂಬೈ ತಂಡವನ್ನು ಬ್ಯಾನ್ ಮಾಡುವಂತೆ ಆಗ್ರಹಿಸಿದ್ದಾರೆ.

ಈ ಬಾರಿಯ ಐಪಿಎಲ್ನಲ್ಲಿ(IPL 2024) ಮುಂಬೈ ತಂಡಕ್ಕೆ ಚೇಸಿಂಗ್ ವೇಳೆ ಎದುರಾದ 5ನೇ ಸೋಲು ಇದಾಗಿದೆ. 6 ಪಂದ್ಯಗಳಲ್ಲಿ ಮುಂಬೈ ಚೇಸಿಂಗ್ ನಡೆಸಿತ್ತು. ಗೆಲುವು ಸಾಧಿಸಿದ್ದು ಒಂದು ಬಾರಿ ಮಾತ್ರ. ಇದು ಆರ್ಸಿಬಿ ವಿರುದ್ಧ. ಸದ್ಯ ಮುಂಬೈ ತಂಡದ ಪ್ಲೇ ಆಫ್ ರೇಸ್ ಬಹುತೇಕ ಅಂತ್ಯ ಕಂಡಿದೆ. 9ನೇ ಸ್ಥಾನದಲ್ಲಿರುವ ಮುಂಬೈಗೆ ಇನ್ನು ಮೂರು ಪಂದ್ಯ ಬಾಕಿ ಇದೆ. ಈ ಪಂದ್ಯ ಗೆದ್ದರೂ ಕೂಡ 12 ಅಂಕ ಆಗಲಿದೆ. ಪ್ಲೇ ಆಫ್ಗೆ ಈ ಅಂಕ ಸಾಲದು. ಹೀಗಾಗಿ ತಂಡ ಟೂರ್ನಿಯಿಂದ ಹೊರಬಿದ್ದಿದೆ ಎಂದರೂ ತಪ್ಪಾಗಲಾರದು.

ವಾಖೆಂಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ತಂಡ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 19.5 ಓವರ್ಗಳಲ್ಲಿ 169 ರನ್ಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬಯಿ 18.5 ಓವರ್ 145 ರನ್ಗಳಿಗೆ ಶರಣಾಗಿ ಸೋಲೊಪ್ಪಿಕೊಂಡಿತು. ಕೆಕೆಅರ್ ಪರ ಬ್ಯಾಟಿಂಗ್ನಲ್ಲಿ ವೆಂಕಟೇಶ್ ಅಯ್ಯರ್ (70) ಅರ್ಧ ಶತಕ ಬಾರಿಸಿ ಮಿಂಚಿದರೆ ಬೌಲಿಂಗ್ನಲ್ಲಿ ಮಿಚೆಲ್ ಸ್ಟಾರ್ಕ್ 4 ವಿಕೆಟ್ ತಮ್ಮದಾಗಿಸಿಕೊಂಡರು.

Comments

No comments yet. Why don’t you start the discussion?

Leave a Reply

Your email address will not be published. Required fields are marked *