ಕರ್ನಾಟಕ SSLC Exam 1 ಪಾಸಾಗಲು ಎಷ್ಟು ಅಂಕ ಗಳಿಸಬೇಕು?

ಕರ್ನಾಟಕ SSLC Exam 1 ಪಾಸಾಗಲು ಎಷ್ಟು ಅಂಕ ಗಳಿಸಬೇಕು?
Spread the love

Karnataka SSLC Passing Marks : ಕರ್ನಾಟಕದ 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ರಿಸಲ್ಟ್‌ ಬಿಡುಗಡೆ ಆಗಲು ದಿನಗಣನೆ ಆರಂಭವಾಗಿದೆ. ನೀವು ಸಹ ಈ ಪರೀಕ್ಷೆ ಬರೆದಿದ್ದಲ್ಲಿ ಶೀಘ್ರವೇ ರಿಸಲ್ಟ್ ಚೆಕ್‌ ಮಾಡಬಹುದು. ಅಂದಹಾಗೆ ರಿಸಲ್ಟ್‌ ಅನ್ನು ಎ+, ಎ, ಬಿ+, ಬಿ, ಸಿ+, ಸಿ ಶ್ರೇಣಿಯಲ್ಲಿಯೂ ಬಿಡುಗಡೆ ಮಾಡಲಾಗುತ್ತದೆ. ನೀವು ಪಾಸಾಗಲು ಎಷ್ಟು ಅಂಕಗಳನ್ನು ವಿಷಯವಾರು ಪಡೆಯಬೇಕು ಎಂಬುದರ ಡೀಟೇಲ್ಸ್‌ ಇಲ್ಲಿ ತಿಳಿಸಲಾಗಿದೆ.

ಮಾ ರ್ಚ್ 25 ರಿಂದ ಏಪ್ರಿಲ್ 2 ರವರೆಗೆ 2023-24ನೇ ಸಾಲಿನ ಕರ್ನಾಟಕ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ನಡೆದಿದೆ. ಈ ಪರೀಕ್ಷೆಯ ಮೌಲ್ಯಮಾಪನ ಕಾರ್ಯವು ಮುಗಿದಿದ್ದು, ಮೇ 8 ರಂದೇ ರಿಸಲ್ಟ್‌ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಮೌಲ್ಯನಿರ್ಣಯ ಮಂಡಳಿ ಮಾಹಿತಿ ನೀಡಿದೆ. ಅಂದಹಾಗೆ ಈ ಪರೀಕ್ಷೆ ಬರೆದ ವಿದ್ಯಾರ್ಥಿಗಳಾದ ನಿಮಗೆ ಪಾಸಾಗಲು ಎಷ್ಟು ಅಂಕ ಬೇಕು, ನೀವು ಎಷ್ಟು ಅಂಕಗಳಿಸಿದರೆ ಯಾವ ಶ್ರೇಣಿಯ ಫಲಿತಾಂಶ ನಿಮ್ಮದಾಗುತ್ತದೆ ಎಂದು ಗೊತ್ತೇ?.. ಗೊತ್ತಿಲ್ಲ ಅಂದ್ರೆ ಚಿಂತೆ ಬೇಡ. ನಿಮಗಾಗಿ, ನಿಮ್ಮ ಪೋಷಕರ ಗಮನಕ್ಕಾಗಿ ಈ ಲೇಖನದಲ್ಲಿ ನಿಮ್ಮ ಫಲಿತಾಂಶಕ್ಕೆ ಸಂಬಂಧಿತ ಮಹತ್ವದ ಕೆಲವು ಮಾಹಿತಿಗಳನ್ನು ನೀಡಲಾಗಿದೆ ಒಮ್ಮೆ ಓದಿಕೊಳ್ಳಿ.

SSLC ವಾರ್ಷಿಕ ಲಿಖಿತ ಪರೀಕ್ಷೆಗೆ, ಆಂತರಿಕ ಮೌಲ್ಯಮಾಪನಕ್ಕೆ ನಿಗದಿತ ಗರಿಷ್ಠ ಅಂಕಗಳು

ವಿಷಯವಾರು ಬಾಹ್ಯ ಪರೀಕ್ಷೆ (ಲಿಖಿತ ಪರೀಕ್ಷೆ)ಗೆ, ಆಂತರಿಕ ಮೌಲ್ಯಮಾಪನಕ್ಕೆ ನಿಗದಿತ ಗರಿಷ್ಠ ಅಂಕಗಳನ್ನು ಕೆಳಗಿನಂತೆ ನೋಡಬಹುದು.

ಪ್ರಥಮ ಭಾಷೆ : ಬಾಹ್ಯ ಪರೀಕ್ಷೆ – 100, ಆಂತರಿಕ ಮೌಲ್ಯಮಾಪನ – 25, ಒಟ್ಟು 125 ಅಂಕಗಳು.

ದ್ವಿತೀಯ ಭಾಷೆ : ಬಾಹ್ಯ ಪರೀಕ್ಷೆ – 80, ಆಂತರಿಕ ಮೌಲ್ಯಮಾಪನ – 20, ಒಟ್ಟು 100 ಅಂಕಗಳು.

ತೃತೀಯ ಭಾಷೆ : ಬಾಹ್ಯ ಪರೀಕ್ಷೆ – 80, ಆಂತರಿಕ ಮೌಲ್ಯಮಾಪನ – 20, ಒಟ್ಟು 100 ಅಂಕಗಳು.

ಗಣಿತ : ಬಾಹ್ಯ ಪರೀಕ್ಷೆ – 80, ಆಂತರಿಕ ಮೌಲ್ಯಮಾಪನ – 20, ಒಟ್ಟು 100 ಅಂಕಗಳು.

ವಿಜ್ಞಾನ: ಬಾಹ್ಯ ಪರೀಕ್ಷೆ – 80, ಆಂತರಿಕ ಮೌಲ್ಯಮಾಪನ – 20, ಒಟ್ಟು 100 ಅಂಕಗಳು.

ಸಮಾಜ ವಿಜ್ಞಾನ : ಬಾಹ್ಯ ಪರೀಕ್ಷೆ – 80, ಆಂತರಿಕ ಮೌಲ್ಯಮಾಪನ – 20, ಒಟ್ಟು 100 ಅಂಕಗಳು.

ಒಟ್ಟು : ಬಾಹ್ಯ ಪರೀಕ್ಷೆ – 500, ಆಂತರಿಕ ಮೌಲ್ಯಮಾಪನ – 125, ಒಟ್ಟು 625 ಅಂಕಗಳು.

ಬಾಹ್ಯ ಪರೀಕ್ಷೆಯಲ್ಲಿ(ಲಿಖಿತ ಪರೀಕ್ಷೆ) ಪ್ರಥಮ ಭಾಷೆಯಲ್ಲಿ 100 ಅಂಕಕ್ಕೆ ಕನಿಷ್ಠ 35 ಹಾಗೂ ಇತರೆ ವಿಷಯಗಳಲ್ಲಿ ಪ್ರತಿ ವಿಷಯಕ್ಕೆ 80 ಅಂಕಕ್ಕೆ ಕನಿಷ್ಠ 28 ಅಂಕಗಳನ್ನು ವಿದ್ಯಾರ್ಥಿಗಳು ಪಾಸಾಗಲು ಪಡೆಯಬೇಕು. ಒಟ್ಟಾರೆ ವಿದ್ಯಾರ್ಥಿಯು ಎಸ್‌ಎಸ್‌ಎಲ್‌ಸಿ ಪಾಸಾಗಲು ಲಿಖಿತ ಪರೀಕ್ಷೆಯ ಒಟ್ಟು 500 ಅಂಕಗಳಿಗೆ ಕನಿಷ್ಠ 175 ಅಂಕಗಳನ್ನು (ಶೇಕಡ.35) ಪಡೆಯಲೇಬೇಕು.

ಲಿಖಿತ ಪರೀಕ್ಷೆಯಲ್ಲಿ ಪಾಸಾಗಲು ಪ್ರತಿ ವಿಷಯದಲ್ಲಿ ಶೇಕಡ.30 ಅಂಕಗಳನ್ನು ಹಾಗೂ ಒಟ್ಟಾರೆ ಎಲ್ಲಾ ವಿಷಯಗಳ ಸರಾಸರಿ ಶೇಕಡ.35 ಅಂಕಗಳನ್ನು ಪಡೆಯಬೇಕು. ಬಾಹ್ಯ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನ ಎಲ್ಲಾ ವಿಷಯಗಳ ಸರಾಸರಿ ಶೇಕಡ.35 ಅಂಕಗಳನ್ನು ಗಳಿಸಬೇಕು.

 

Comments

No comments yet. Why don’t you start the discussion?

Leave a Reply

Your email address will not be published. Required fields are marked *