ಕರ್ನಾಟಕದಲ್ಲಿ ಕೆಇಎ ಎಡವಟ್ಟು : ರಾಷ್ಟ್ರಪತಿ ದ್ರೌಪದಿ‌ ಮುರ್ಮು ರಾಜ್ಯಪಾಲರಿಗೆ ಒಕ್ಕೂಟಗಳಿಂದ ಪತ್ರ

ಕರ್ನಾಟಕದಲ್ಲಿ ಕೆಇಎ ಎಡವಟ್ಟು : ರಾಷ್ಟ್ರಪತಿ ದ್ರೌಪದಿ‌ ಮುರ್ಮು ರಾಜ್ಯಪಾಲರಿಗೆ ಒಕ್ಕೂಟಗಳಿಂದ ಪತ್ರ
Spread the love

ಸಿಇಟಿ ಪರೀಕ್ಷೆ ವಿಚಾರದಲ್ಲಿ ಹಲವಾರು ಗೊಂದಲಗಳು ಉಂಟಾಗಿತ್ತು.. ಪರೀಕ ಮಂಡಳಿಯು ಪರೀಕ್ಷೆಯಲ್ಲಿ ಬರೋಬ್ಬರಿ 50 ಪಠ್ಯೇತರ ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳಿಗೆ ಸಮಸ್ಯೆ ಮಾಡಿತ್ತು. ಇದು ಇದೀಗ ಸಾಬೀತಾಗಿದ್ದು ಹಲವಾರು ಸಂಘಟನೆಯಿಂದ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತಿದೆ.

ಕೆಇಎ ಅಧಿಕಾರಿಗಳು ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡುತ್ತಿದ್ದು, ತಪ್ಪು ಮಾಡಿದ ಅಧಿಕಾರಿಗಳ ವಿರುದ್ದ ಇನ್ನೂ ಕ್ರಮ ಜರುಗಿಸಿಲ್ಲ. ಯಾವ ಕಾರಣದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆಲ ಪಠ್ಯಗಳನ್ನು ಕೈಬಿಡುವ ನಿರ್ಧಾರವನ್ನು ಮಾಡಿದೆ? ರುಪ್ಸಾ ಪ್ರಶ್ನಿಸಿದೆ. ಇದು NEET ಬರೆಯುವ ವಿಧ್ಯಾರ್ಥಿಗಳಿಗೆ ತೊಂದರೆ ಆಗುವುದಿಲ್ಲವೇ? ಇದರ ಹಿಂದೆ ಟ್ಯೂಷನ್ ಮಾಫಿಯಾ ಇದೆಯಾ?

ಇದೆಲ್ಲದರ ಬಗ್ಗೆ ತನಿಖೆ ನಡೆಸಿ ಕೂಡಲೇ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ರಾಷ್ಟ್ರಪತಿ ದ್ರೌಪದಿ‌ ಮುರ್ಮು ಅವರಿಗೆ ರುಪ್ಸಾ ಸಂಘಟನೆ ಪತ್ರವನ್ನು ಬರೆದಿದೆ. ಇದೇ ವಿಚಾರವಾಗಿ KEA ನಿರ್ದೇಶಕರ ತಲೆದಂಡಕ್ಕೆ ಒತ್ತಡ ಹೆಚ್ಚಿದ್ದು, ಮಂಡಳಿ ಮುಂದಿನ ತೀರ್ಮಾನ ಏನು ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ..

Comments

No comments yet. Why don’t you start the discussion?

Leave a Reply

Your email address will not be published. Required fields are marked *