SSLC ಫಲಿತಾಂಶ ಪ್ರಕಟ : ಉಡುಪಿ ಫಸ್ಟ್ ಯಾದಗಿರಿ ಲಾಸ್ಟ್

SSLC ಫಲಿತಾಂಶ ಪ್ರಕಟ : ಉಡುಪಿ ಫಸ್ಟ್ ಯಾದಗಿರಿ ಲಾಸ್ಟ್
Spread the love

ಎಸ್‌ಎಸ್‌ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷಾ ಮಂಡಳಿಯಲ್ಲಿ ಸುದ್ದಿಗೋಷ್ಟಿ ಮೂಲಕ ಫಲಿತಾಂಶ ಪ್ರಕಟ ಮಾಡಲಾಗಿದೆ. ರಾಜ್ಯಾದ್ಯಂತ 76.91 ರಷ್ಟು ಫಲಿತಾಂಶ ಬಂದಿದೆ. ಮಂಡಳಿಯ ವೆಬ್ಸೈಟ್ ಮೂಲಕವೂ ಫಲಿತಾಂಶವನ್ನು ನೋಡಬಹುದು.

ಎಸ್‌ಎಸ್‌ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು ಇದರಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡಕ್ಕೆ ಎರಡನೇ ಸ್ಥಾನ ಬಂದಿದೆ

ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ ಸಿಕ್ಕಿದೆ. ಈ ಬಾರಿಯೂ ನಿರೀಕ್ಷೆಯಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

 

ಬಾಗಲಕೋಟೆಯ ಅಂಕಿತ ಪ್ರಥಮ ಸ್ಥಾನ 625 ಅಂಕಕ್ಕೆ 625 ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಏಕೈಕ ವಿದ್ಯಾರ್ಥಿನಿ.

 

ಟಾಪರ್ಸ್ ಸ್ಥಾನದಲ್ಲಿ: ಮೇದಾ. ಪಿ ಶೆಟ್ಟಿ ಬೆಂಗಳೂರು, ಹರ್ಷಿತಾ ಡಿ.ಎಂ. ಮಧುಗಿರಿ ಈ ಇಬ್ಬರು ವಿದ್ಯಾರ್ಧಿನಿಯರು 624 ಅಂಕಗಳನ್ನು ಪಡೆದಿದ್ದಾರೆ.

Comments

No comments yet. Why don’t you start the discussion?

Leave a Reply

Your email address will not be published. Required fields are marked *